ನಮ್ಮ ಬಗ್ಗೆ

ಗುರಿ

ನಮ್ಮ ಸಹಕಾರಿಯ ಗುರಿಯು ಸಣ್ಣ ಮತ್ತು ಅತಿಸಣ್ಣ ಪ್ರಮಾಣದಲ್ಲಿ ಆರ್ಥಿಕಸಹಾಯವನ್ನು ಜಾಮೀನಿನ ಮೇಲೆ ಕೊಡುವುದಾಗಿದೆ. ಇಂತಹ ಸಾಲಗಳನ್ನು ನಾವು ಸಹಕಾರಿಯ ವತಿಯಿಂದ ಜಾಮೀನುಸಾಲದ ಅಡಿಯಲ್ಲಿ ಕೊಡುತ್ತಿದ್ದೇವೆ. ನವಯುಗದ ಬ್ಯಾಂಕಿಂಗ್ ಸೇವೆಗಳನ್ನು ನಮ್ಮ ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ವಲಯಗಳಲ್ಲಿರುವ ಗ್ರಾಹಕರವರೆಗೂ ವಿಸ್ತರಿಸುವುದರಲ್ಲಿ ನಾವು ಕಟಿಬದ್ಧರಾಗಿದ್ದೇವೆ ಹಾಗೂ ಈ ಸೇವೆಗಳನ್ನು ಗದಗ ಜಿಲ್ಲೆಯ ಅಕ್ಕ ಪಕ್ಕದ ಜಿಲ್ಲೆಗಳಿಗೂ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಗ್ರಾಹಕರ ಅಭಿರುಚಿಗೆ ತಕ್ಕಂತೇ ವಿವಿಧ ಸಾಲ ಮತ್ತು ಠೇವಣಿ ಯೋಜನೆಗಳನ್ನು ಹೊಂದಿದ್ದೇವೆ. ಪ್ರತಿಯೊಂದು ತ್ರೈಮಾಸಿಕದಲ್ಲಿಯೂ ಸಾಲ ಮತ್ತು ಠೇವಣಿಗಳ ನಡುವೆ ಸಮತ್ವ ಮತ್ತು ಸ್ಥಿರತೆಯನ್ನು ನಾವು ಕಾಪಾಡಿಕೊಂಡು ಬರುತ್ತಿದ್ದೇವೆ.

ಪ್ರಾರಂಭ

2014 ರಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಮಾಡುವುದಕ್ಕಾಗಿ ಪ್ರೇರಿತರಾದ ಗದಗ ನಗರವಾಸಿಗಳ ಗುಂಪೊಂದು ಅನಘಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯನ್ನು ರೂ. 8,99,200ಗಳ ಬಂಡವಾಳದೊಂದಿಗೆ ಪ್ರಾರಂಭಿಸಿತು.ಆ ಕಾಲದಲ್ಲಿ ಗದಗ ನಗರದಲ್ಲಿ ಕಡಿಮೆ ಆದಾಯವುಳ್ಳ ಔದ್ಯೋಗಿಕವರ್ಗದವರೂ ಹಾಗೂ ಬಡತನದ ರೇಖೆಗಿಂತ ಕೆಳಗೆ ಇರುವ ಜನರ ಪ್ರಾಬಲ್ಯವಿತ್ತು. ಕೇವಲ ಕೆಲವೇ ಕಾಲದಲ್ಲಿ ಅನಘಾ ಸಹಕಾರಿಯು ಅತ್ಯಂತ ಸಣ್ಣ ವ್ಯಾಪಾರಿಗಳಿಗೂ ಹಾಗೂ ಬೀದಿ ವ್ಯಾಪಾರಿಗಳಿಗೂ ಆರ್ಥಿಕ ಸಹಾಯ ಒದಗಿಸಿತು.

ಬೆಳವಣಿಗೆ ಮತ್ತು ಬಲ

31ನೇ ಮಾರ್ಚ್ 2015 ಕ್ಕೆ ನಮ್ಮ ಸಹಕಾರಿಯ ಸದಸ್ಯರ ಸಂಖ್ಯೆ 185 ಇದ್ದದ್ದು ನಿಧಾನವಾಗಿ ಏರುತ್ತಾ 31ನೇ ಮಾರ್ಚ್ 2019 ರ ವೇಳೆಗೆ 647 ಸದಸ್ಯರನ್ನು ಹೊಂದಿದೆ. ಸಹಕಾರಿಯ ಒಟ್ಟು ವ್ಯವಹಾರವು 31ನೇ ಮಾರ್ಚ್ 2019 ರಲ್ಲಿ 7.52 ಕೋಟಿ ರೂಪಾಯಿಗಳಷ್ಟು ಆಗಿದೆ. ಸಹಕಾರಿಯ ಠೇವಣಿಗಳ ಮೊತ್ತವು 31ನೇ ಮಾರ್ಚ್ 2019 ಕ್ಕೆರೂ. 6 ಕೋಟಿ, ಹಾಗೂ ಮುಂಗಡಗಳು ರೂ.5 ಕೋಟಿಯನ್ನು ತಲುಪಿವೆ. 31ನೇ ಮಾರ್ಚ್ 2019ಕ್ಕೆ ಸಹಕಾರಿಯ ಸಂದಾಯವಾದ ಷೇರು ಬಂಡವಾಳವು ರೂ. 11,91,000 ಇರುತ್ತದೆ. ಸಹಕಾರಿಯ CASA ಅನುಪಾತವು 31ನೇಮಾರ್ಚ್ 2019 ರಲ್ಲಿ 17.26% ನಷ್ಟು ಇದೆ.

ಸದಸ್ಯರ ಬಲ

ವರ್ಷ ಸದಸ್ಯರ ಸಂಖ್ಯೆ
2014-15 189
2015-16 304
2016-17 570
2017-18 577
2018-19 647

ಲಾಭಾಂಶ ವಿಂಗಡನೆ

ವರ್ಷ ವಿಭಜನೆ %
2014-15 0
2015-16 12
2016-17 13
2017-18 14
2018-19 15

ಆವರ್ತನ ಠೇವಣೆ

ವರ್ಷ ಮೊತ್ತ
2015 1,12,800
2016 3,85,000
2017 1,92,300
2018 6,43,250
2019 8,07,150

ಮುದ್ದತಿ ಠೇವು

ವರ್ಷ ಮೊತ್ತ
2015 2,70,97,914
2016 4,23,22,544
2017 4,62,99,726
2018 4,62,07,880
2019 4,95,46,466

ಪಿಗ್ಮಿ ಠೇವಣಿ

ವರ್ಷ ಮೊತ್ತ
2015 13,32,838
2016 30,22,504
2017 46,25,325
2018 51,89,049
2019 42,84,188

ಭದ್ರತಾ ಠೇವಣಿ

ವರ್ಷ ಮೊತ್ತ
2015 20,000
2016 30,000
2017 44,000
2018 60,000
2019 50,000

ಉಳಿತಾಯ ಠೇವಣಿ

ವರ್ಷ ಮೊತ್ತ
2015 1,47,659
2016 13,38,553
2017 25,51,146
2018 25,19,191
2019 43,21,723

ಚಾಲ್ತಿ ಖಾತೆ ಠೇವಣಿ

ವರ್ಷ ಮೊತ್ತ
2015
2016 27,088
2017 1,04,999
2018 46,694
2019 94,568

ಒಟ್ಟು ಠೇವಣಿಗಳು

ವರ್ಷ ಮೊತ್ತ
2015 2,87,11,211
2016 4,71,25,689
2017 5,38,17,496
2018 5,46,66,064
2019 5,91,04,095